HOME
CINEMA NEWS
GALLERY
TV NEWS
REVIEWS
CONTACT US
ಬೃಹಸ್ಪತಿ
ರಜನಿಕಾಂತ್ ಅಳಿಯ ಧನುಷ್ ನಾಯಕನಾಗಿ ಅಲ್ಲದೆ ನಿರ್ಮಾಣ ಮಾಡಿರುವ ತಮಿಳು ಚಿತ್ರ ‘ವಿಐಪಿ’ 2014ರಲ್ಲಿ ತೆರೆಕಂಡು ಯಶಸ್ಸು ಗಳಿಸಿತ್ತು. ಕೆಲಸವಿಲ್ಲದ ಇಂಜನಿಯರ್ ಪದವೀಧರನ ಕತೆಯಾಗಿದೆ. ಈಗ ಅದೇ ಶೀರ್ಷಿಕೆಯೊಂದಿಗೆ ಕನ್ನಡದಲ್ಲಿ ಮನೋರಂಜನ್‍ರವಿಚಂದ್ರನ್ ನಾಯಕತ್ವದಲ್ಲಿ ಚಿತ್ರೀಕರಣ ಗೊಂಡಿದೆ. ವೃತ್ತಿ ಇಲ್ಲದ ಪದವೀದರ ಅಡಿಬರಹದಲ್ಲಿ ಹೇಳಿಕೊಂಡಿದ್ದರೂ, ಆನಂತರ ‘ಸನ್ ಆಫ್ ರವಿಚಂದ್ರನ್’ ಶೀರ್ಷಿಕೆಯನ್ನು ಇಡಲು ತಂಡವು ಒಲವು ತೋರಿಸಿತ್ತು. ಈಗ ಅಂತಿಮವಾಗಿ ‘ಬೃಹಸ್ಪತಿ’ ನಾಮಕರಣದೊಂದಿಗೆ ಅಂತಿಮಗೊಳಿಸಲಾಗಿದೆ. ನಾಯಕಿಯಾಗಿ ಬಾಲಿವುಡ್‍ನ ಮಿಷ್ಟಿಚಕ್ರವರ್ತಿ ನಟನೆ ಇದೆ. ಇವರು ಈಗಾಗಲೆ ತೆಲುಗು, ಬಂಗಾಳಿ ಭಾಷೆಗಳಲ್ಲಿ ನಟಿಸಿ ಖ್ಯಾತಿಯನ್ನು ಹೊಂದಿದ್ದಾರೆ. ಸಾಹೇಬ ನಂತರ ನಟಿಸಿರುವ ಎರಡನೇ ಚಿತ್ರದಲ್ಲಿ ಮನೋರಂಜನ್ ನಿರುದ್ಯೋಗಿ ಪಾತ್ರದಲ್ಲಿ ಕಾಣ ಸಿಕೊಂಡಿದ್ದಾರೆ. ಅಧ್ಯಕ್ಷ, ಮಾಣ ಕ್ಯ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಂದಕಿಶೋರ್ ನಿರ್ದೇಶನ ಮಾಡಿರುವ ಚಿತ್ರವು ಸದ್ಯ ಚಿತ್ರೀಕರಣೋತ್ತರ ಕೆಲಸಗಳಲ್ಲಿ ಬ್ಯುಸಿ ಇದೆ. ಛಾಯಗ್ರಹಣ ಸತ್ಯಹೆಗಡೆ, ಸಂಗೀತ ಹರಿಕೃಷ್ಣ ಅವರದಾಗಿದೆ. ಸ್ಟಾರ್ ನಿರ್ಮಾಪಕ ರಾಕ್‍ಲೈನ್‍ವೆಂಕಟೇಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾವು ಡಿಸೆಂಬರ್ ಒಳಗೆ ಬಿಡುಗಡೆಯಾಗುವ ಸಾದ್ಯತೆ ಇದೆ.
ಒಂದು ಹಾಡಿನಲ್ಲಿ 56 ತಾರೆಯರು
ಸ್ಯಾಂಡಲ್‍ವುಡ್‍ನಲ್ಲಿ ಚಿತ್ರವನ್ನು ಜನರಿಗೆ ತಲುಪಿಸಲು ನಾನಾ ಮಾರ್ಗಗಳನ್ನು ಹುಡುಕುತ್ತಾರೆ. ವಜ್ರಕಾಯ ಶೀರ್ಷಿಕೆ ಗೀತೆಯಲ್ಲಿ ಮೂರು ಭಾಷೆಯ ನಟರುಗಳು ಹಾಡಿಗೆ ಹೆಜ್ಜೆ ಹಾಕಿದ್ದರು. ಅದರಂತೆ ಇತ್ತೀಚಿನ ಬಿ.ಸಿ.ಪಾಟೀಲ್ ನಿರ್ಮಾಣದ ಹ್ಯಾಪಿ ನ್ಯೂ ಹಿಯರ್ ದಲ್ಲಿ ಹಲವರು ತೆರೆ ಮೇಲೆ ಕಾಣ ಸಿಕೊಂಡಿದ್ದರು.

ಮುಂದೆ ಓದಿರಿ..................................
ನಾಗಭರಣ ಹೊಸ ಚಿತ್ರ
ಹಿರಿಯ ನಿರ್ದೇಶಕ ಟಿ.ಎಸ್.ನಾಗಭರಣರವರ ಅಲ್ಲಮ ಚಿತ್ರವು ನಿರೀಕ್ಷಿಸಿದಂತೆ ಯಶಸ್ಸು ಕಾಣಲಿಲ್ಲ. ಆದರೂ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಈಗ ಅವರು ಎಲ್ಲವನ್ನು ಮರೆತು ಹೊಸ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ.

ಮುಂದೆ ಓದಿರಿ..................................
ಅಂತರರಾಷ್ಟ್ರೀಯ ಮಟ್ಟದಲ್ಲಿ ಸರ್ವಸ್ವ ಆಯ್ಕೆ
ಚಂದನವನದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಿರುವುದು ಆರೋಗ್ಯಕರ ಬೆಳವಣ ಗೆಯಾಗಿದೆ. ಅಲ್ಲದೆ ಇಲ್ಲಿನ ಕತೆಗಳು ಬೇರೆ ಭಾಷಿಗರನ್ನು ಸೆಳೆಯುತ್ತಿದೆ. ಅದೇ ರೀತಿಯಲ್ಲಿ ‘ಸರ್ವಸ್ವ’ ಸಿನಿಮಾವು ಅಂತರರಾಷ್ಟ್ರೀಯ ಮಟ್ಟದ ಫಿಲ್ಮ್ ಸ್ಪರ್ಧೆಯಲ್ಲಿ ಗುರುತಿಸಿಕೊಂಡಿದೆ.

ಮುಂದೆ ಓದಿರಿ..................................
ಚಿರು-ಮೇಘನಾ ನಿಶ್ಚಿತಾರ್ಥ
ಹತ್ತು ವರ್ಷಗಳಿಂದ ಪ್ರೀತಿಯಲ್ಲಿದ್ದ ಚಿರಂಜೀವಿಸರ್ಜಾ-ಮೇಘನಾರಾಜ್‍ರನ್ನು ಮಾದ್ಯಮದವರು ಈ ವಿಷಯವನ್ನು ಕೇಳಿದಾಗಲೆಲ್ಲಾ ನಾವಿಬ್ಬರು ಸ್ನೇಹಿತರು ಅಂತ ಜಾರಿಕೊಳ್ಳುತ್ತಿದ್ದರು. ಈಗ ಕೊನೆಗೂ ಲವ್ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಅದರಂತೆ ಎರಡು ಕುಟುಂಬಗಳು ಸಂಬಂದ ಬೆಸೆಯಲು ಮುಂದಾಗಿದೆ. ಅರ್ಜುನ್‍ಸರ್ಜಾ ಸೋದರಿ ಹಿರಿಮಗನಾಗಿರುವ ಚಿರಂಜೀವಿಸರ್ಜಾ ಮತ್ತು ಸುಂದರರಾಜ್-ಪ್ರಮೀಳಾಜೋಷಾಯ್

ಮುಂದೆ ಓದಿರಿ..................................
ಐಫೋನ್‍ನಲ್ಲಿ ಚಿತ್ರೀಕರಣವಾಗಿರುವ ಸಿನಿಮಾ
ತಂತ್ರಜ್ಘಾನಗಳು ಬೆಳದಂತೆ ವಿಭಿನ್ನ ರೀತಿಯ ಹೊಸ ಕ್ಯಾಮಾರಗಳನ್ನು ಬಳಸಿಕೊಂಡ ಚಿತ್ರಗಳು ಬರುತ್ತಿವೆ. ಸೋಜಿಗ ಎನ್ನುವಂತೆ ಭಾರತದಲ್ಲಿ ಮೊದಲಬಾರಿ ಐಫೋನ್ ನಲ್ಲಿ ಶೂಟ್ ಮಾಡಿರುವ ‘ಮಾ ಯೇ ಸಿನಿಮಾ ಹೈ’ ಹಿಂದಿ ಸಿನಿಮಾಗೆ ಕನ್ನಡಿಗ ಸಂದೀಪ್‍ಮಲಾನಿ ಕತೆ,ಚಿತ್ರಕತೆ, ಸಂಭಾಷಣೆ, ಛಾಯಗ್ರಹಣ ಜೊತೆಗೆ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಮುಂದೆ ಓದಿರಿ..................................
ಬುದುಕಿನ ಯಾನ, ನೀವೊಮ್ಮೆ ಗಮನಿಸಿ
ಕೆಲವು ಸಲ ನಮ್ಮ ಬುದಕಿನ ಸುತ್ತ-ಮುತ್ತ ಹಲವು ರೀತಿಯ ಘಟನೆಗಳು ನಮಗೆ ಅರಿವಿಲ್ಲದಂತೆ ನಡೆಯುತ್ತದೆ. ಅಂತಹುಗಳ ಘಟನೆಗಳನ್ನು ಹೆಕ್ಕಿ ಅದಕ್ಕೊಂದು ಸುಂದರರೂಪ ಕೊಟ್ಟು ಪ್ರೇಕ್ಷಕರಿಗೆ ರುಚಿಯಾದ ಊಟ ಬಡಿಸಿರುವುದು ‘ದಯವಿಟ್ಟು ಗಮನಿಸಿ’ ಚಿತ್ರದಲ್ಲಿ ಕಾಣ ಸುತ್ತದೆ. ನಿಲ್ದಾಣದಲ್ಲಿ ರೈಲ್ವೆ ಹೊರಡುವದರೊಂದಿಗೆ ಕತೆ ತೆರೆದುಕೊಳ್ಳುತ್ತದೆ. ಸಿನಿಮಾದಲ್ಲಿ ನಾಲ್ಕು ಬಗೆಯ ಸಂಕೀರ್ಣ ಕತೆಗಳು ಬರಲಿದೆ.

ಮುಂದೆ ಓದಿರಿ..................................
ಸತ್ಯ ಹರಿಶ್ಚಂದ್ರನ ಪ್ರೇಮಕಥಾ ಪ್ರಸಂಗ
ಸದಾ ಸುಳ್ಳನ್ನು ಹೇಳುತ್ತ ಹೋದಂತೆ ಅದು ಮನುಷ್ಯನನ್ನು ಯಾವ ರೀತಿಯ ಸಂಕಷ್ಟಗಳಿಗೆ ಈಡುಮಾಡುತ್ತೆ ಅನ್ನೋದನ್ನು ಹೇಳುವ ಚಿತ್ರವೇ ಸತ್ಯ ಹರಿಶ್ಚಂದ್ರ. ಇಲ್ಲಿ ನಾಯಕನ ಹೆಸರು ಸತ್ಯ ಹರಿಶ್ಚಂದ್ರ(ಶರಣ್), ಆತನ ಬಾಯಲ್ಲಿ ಬರೋದೆಲ್ಲಾ ಬರೀ ಸುಳ್ಳು.

ಮುಂದೆ ಓದಿರಿ..................................
ಭಯೋತ್ಪಾದನೆ ಕಥನದಲ್ಲಿ ರಾಗಿಣ ನಾಯಕಿ
ಗಣೇಶ್-ಭಾವನಾ ಅಭಿನಯದಲ್ಲಿ ರೋಮಿಯೋ, ರಂಗಾಯಣರಘು-ಸಾಧುಕೋಕಿಲ ಜುಗಲ್‍ಬಂದಿಯಲ್ಲಿ ಚಡ್ಡಿದೋಸ್ತ್, ಮೊಟ್ಟ ಮೊದಲಬಾರಿ ನಾಯಕನಾಗಿ ಮಿತ್ರ ನಟಿಸಿರುವ ರಾಗ, ಇವೆಲ್ಲಾ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರವುದು ಚಂದನವನದ ಸೃಜನಾತ್ಮಕ ನಿರ್ದೇಶಕರೆಂದು ಗುರುತಿಸಿಕೊಂಡಿರುವ ಪಿ.ಸಿ.ಶೇಖರ್. ಪ್ರತಿ ಸಿನಿಮಾದಲ್ಲಿ ವಿನೂತನ ಕತೆಯನ್ನು ಹೇಳಿರುವ ನಿರ್ದೇಶಕರು ಈ ಬಾರಿ ಭಯೋತ್ಪಾದನೆ ಕುರಿತ ಚಿತ್ರ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಮುಂದೆ ಓದಿರಿ..................................
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

LATEST GALLERY
LATEST CINEMA NEWS