HOME
CINEMA NEWS
GALLERY
TV NEWS
REVIEWS
CONTACT US
ಪ್ರೀತಿಯ ಪೂಜೆ ಮತ್ತು ದ್ವೇಷದ ಕಥನ
ಉಪೇಂದ್ರ ಅವರ ಎ ಸಿನಿಮಾವು ಶುರುವಾದ ನಂತರ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿಯೇ ಕತೆ ಬಿಚ್ಚಿಕೊಳ್ಳುತ್ತದೆ. ಅದರಂತೆ ‘ಎ+’ ಚಿತ್ರದ ನಿರ್ದೇಶಕ ಇವರ ಶಿಷ್ಯನಾಗಿದ್ದರಿಂದ ಗುರುಗಳಂತೆ ಕತೆ ಬರೆದು ಅವರ ಹಂತಕ್ಕೆ ಹೋಗುವ ಪ್ರಯತ್ನ ಮಾಡಿರುವುದು ಎದ್ದು ಕಾಣಿಸುತ್ತದೆ. ಕತೆಯ ಕುರಿತು ಹೇಳುವುದಾದರೆ ಅವನು ಕಟುಕನಾಗಿ ಪ್ರೀತಿಯನ್ನು ದ್ವೇಷಿಸಿದರೆ, ಅವಳು ಕಟುಕಿಯಾಗಿ ಅದನ್ನು ಪೂಜಿಸುತ್ತಾಳೆ. ಗುರುವಿನ ಕುಟುಂಬ ಹಾಳು ಮಾಡಿದ ಶ್ರೀಮಂತ ವ್ಯಕ್ತಿಗೆ ಪಾಠ ಕಲಿಸಲು ಮುಂದಾದರೆ, ಅಪ್ಪನನ್ನು ಅವಮಾನಿಸಿದ ಕಾರಣಕ್ಕೆ ಪ್ರೀತಿಸಿದವನನ್ನೆ ಸೋಲಿಸಲು ಅವಳು ಹೊರಡುತ್ತಾಳೆ. ಇವೆಲ್ಲವನ್ನು ನೋಡುವಾಗ ಪ್ರೇಕ್ಷಕನಿಗೆ ಗೊಂದಲ ಸೃಷ್ಟಿಯಾಗುತ್ತದೆ. ಕೆಟ್ಟ ಸಮಾಜದ ಚಿತ್ರಣ, ಹೆತ್ತವರ ಬೈಗುಳ, ಮರುಕ, ಮೋಸ, ವಂಚನೆ ಎಲ್ಲವನ್ನು ನೇರವಾಗಿ ಹೇಳದೆ ಎಲ್ಲೋ ಒಂದು ಕಡೆ ತೆಗೆದುಕೊಂಡು ಹೋಗಿ, ಕ್ಲೈಮಾಕ್ಸ್‍ನಲ್ಲಿ ಅದಕ್ಕೊಂದು ಸುಂದರ ಅರ್ಥ ಕೊಡುವುದೇ ಸಮಾಧಾನವಾಗಿದೆ. ಪ್ರಾರಂಭದಲ್ಲಿ ಬರುವ ದೃಶ್ಯಗಳು ಪ್ರೇಕ್ಷಕ ಯೋಚಿಸುತ್ತಿರುವಾಗಲೇ, ಬೇರೊಂದು ಬಂದು ಅದನ್ನು ಮರೆಸುತ್ತದೆ. ಕತೆಯು ಮುಂದೇನು ಆಗುತ್ತದೆ ಅಂತ ನಿರೂಪಣೆಯಲ್ಲಿ ಹೇಳಿರುವುದರಿಂದ ಕೊನೆ ತನಕ ನೋಡಬಹುದಾಗಿದೆ.

ಕಿರುತೆರೆಯಲ್ಲಿ ನಟಿಸಿರುವ ಸಿದ್ದು ಅಬ್ಬರಿಸಿ,ಬೊಬ್ಬರಿಸಿ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಧಾರವಾಹಿಗಳಲ್ಲಿ ನಟಿಸಿರುವ ಸಂಗೀತ ಮೋಸ ಮಾಡುವ ಹುಡುಗಿಯಾಗಿ ಚೆನ್ನಾಗಿ ಅಭಿನಯಿಸಿದ್ದಾರೆ. ಉಳಿದಂತೆ ಮಧುಸೂಧನ್, ಪ್ರಶಾಂತ್‍ಸಿದ್ದಿ, ಆಶಾರಾಣಿ ಗಮನ ಸೆಳಯುತ್ತಾರೆ. ಭೂಪೇಂದರ್‍ಸಿಂಗ್ ಛಾಯಗ್ರಹಣ ಬೆಂಗಳೂರು ಗಲ್ಲಿಗಳನ್ನು ಸುಂದರವಾಗಿ ಸೆರೆಹಿಡಿದಿರುವುದು ಪ್ಲಸ್ ಪಾಯಿಂಟ್ ಆಗಿದೆ. ಹಾಡು, ಫೈಟ್ ಇರದ ಕಾರಣ ಇದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಕತೆ ,ಚಿತ್ರಕತೆ,ಸಂಭಾಷಣೆ ರಚಿಸಿ ನಿರ್ದೇಶನ ಮಾಡಿರುವ ವಿಜಯ್‍ಸೂರ್ಯ ಕಷ್ಟಪಟ್ಟು ಸುಂದರ ರೂಪ ತರುವಲ್ಲಿ ಯಶಸ್ಸನ್ನು ಕಂಡಿದ್ದಾರೆ. ಗಣೇಶ್‍ನಾರಾಯಣ್ ಹಿನ್ನಲೆ ಸಂಗೀತ ಮತ್ತೋಂದು ಪ್ಲಸ್ ಪಾಯಿಂಟ್ ಆಗಿದೆ.
ನಿರ್ಮಾಣ: ಪ್ರಭುಕುಮಾರ್
ಸಿನಿ ಸರ್ಕಲ್.ಇನ್ ವಿಮರ್ಶೆ
***
7/10/18
ಹಲವು ವಿಶೇಷತೆಗಳನ್ನು ತುಂಬಿಕೊಂಡಿರುವ ಎ+
ಹೊಸಬರ ‘ಎ+’ ಸಿನಿಮಾದಲ್ಲಿ ಹಾಡುಗಳು, ಸಾಹಸ ದೃಶ್ಯಗಳು ಇರುವುದಿಲ್ಲ. ಯಾವುದೇ ಕಾರಣಕ್ಕೂ ಇದು ರಿಲೀಸ್ ಆಗ್ಬಾರ್ದು ಎಂದು ಅಡಿಬರಹದಲ್ಲಿ ಹೇಳಲಾಗಿದೆ. ಇದೇ ಶೀರ್ಷಿಕೆಯನ್ನು ಯಾವ ಕಾರಣಕ್ಕೆ ಇಡಲಾಗಿದೆ. ನಿರ್ಮಾಪಕರು ನಿರ್ದೇಶಕರೊಂದಿಗೆ ಚರ್ಚಿಸುವಾಗ ಪ್ರಶ್ನೆಗಳನ್ನು ಕೇಳಿರುವುದೇ ಕತೆಯಾಗಿದೆ. ಕೊನೆಗೆ ನೋಡುಗರಿಗೆ ಕಾಡುತ್ತದಂತೆ. ಇವೆಲ್ಲವನ್ನು ಸಿನಿಮಾ ನೋಡಿದರೆ ತಿಳಿಯುತ್ತದೆಂದು ನಿರ್ದೇಶಕ ವಿಜಯಸೂರ್ಯ ಹೇಳಿಕೊಂಡಿದ್ದಾರೆ. ಇವರು ಉಪೇಂದ್ರ ಶಿಷ್ಯರಾಗಿರುವುದರಿಂದ ಚಿತ್ರದ ರಹಸ್ಯವನ್ನು ಕಾಪಾಡಿಕೊಂಡು ಈ ರೀತಿ ಹುಳ ಬಿಟ್ಟಿದ್ದಾರೆ. ಗುರುಗಳ ಹಿಂದಿನ ಚಿತ್ರಕ್ಕೆ ಕಳಂಕ ಬರದಂತೆ ಕತೆಯನ್ನು ಸಿದ್ದಪಡಿಸಲಾಗಿದೆ ಎಂಬುದಾಗಿ ಖಾತರಿ ಕೊಡುತ್ತಾರೆ. ದೃಶ್ಯಗಳಿಗೆ ಕತ್ತರಿ ಹಾಕದೆ, ಸಂಭಾಷೆಣೆಯನ್ನು ಮ್ಯೂಟ್ ಮಾಡದೆ ಸೆನ್ಸಾರ್‍ನವರು ಯುಎ ಪ್ರಮಾಣ ಪತ್ರ ನೀಡಿದ್ದಾರೆ. ಪ್ರೇಕ್ಷಕರು ಒಂದು ಹಂತದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆಂದು ಅಧಿಕಾರಿಗಳು ಹೇಳಿದಂತೆ ತಂಡಕ್ಕೆ ಸಿನಿಮಾವು ಜನರಿಗೆ ತಲುಪಲಿದೆ ಎಂಬ ಆಶಾಭಾವನೆಯಲ್ಲಿದ್ದಾರೆ.

ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು. ಅದನ್ನು ಯಾವ ರೀತಿ ಮಾಡುತ್ತಾನೆ ಎನ್ನುವ ಪಾತ್ರದಲ್ಲಿ ಅನಿಲ್‍ಸಿದ್ದು ನಾಯಕ. ಕಿರುತೆರೆ ನಟಿ ಸಂಗೀತ ನಾಯಕಿ. ಆಶರಾಣಿ ನಾಯಕನ ತಾಯಿ, ನಾಗೇಶ್ ತಂದೆ, ಎರಡನೆ ಖಳನಾಯಕನಾಗಿ ಸುನಿಲ್‍ಕುಮಾರ್ , ಮುರಳಿಮೋಹನ್ ಅಭಿನಯಿಸಿದ್ದಾರೆ. ಮಾಲೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಛಾಯಗ್ರಹಣ ಭೂಪಿಂದರ್‍ಸಿಂಗ್, ಸಂಕಲನ ರಾಜು ನಿರ್ವಹಿಸಿದ್ದಾರೆ. ಸಂಗೀತ ನಿರ್ದೇಶಕ ಗಣೇಶ್‍ನಾರಾಯಣ್ ಅವರ ಹುಟ್ಟಹಬ್ಬವು ಇದೇ ಐದರಂದು ಇರುವುದರಿಂದ ನಿರ್ಮಾಪಕ ಪ್ರಭುಕುಮಾರ್ ಅವರಿಗೆ ಉಡುಗೊರೆಯಾಗಿ ಅದೇ ದಿನದಂದು ರಾಜ್ಯದ್ಯಂತ 50 ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
2/10/18

ಉಪೇಂದ್ರ ಎ ಶಿಷ್ಯ ಎ+
ಉಪೇಂದ್ರ ಗರಡಿಯಲ್ಲಿ ಪಳಗಿದವರು ಚಂದನವನದಲ್ಲಿ ನಿರ್ದೇಶಕರಾಗುತ್ತಿರುವಂತೆ, ಅದರ ಸಾಲಿಗೆ ವಿಜಯಸೂರ್ಯ ಸೇರ್ಪಡೆಯಾಗಿದ್ದಾರೆ. ಗುರುಗಳ ಚಿತ್ರದ ಹೆಸರಿಗೆ ಪ್ಲಸ್ ಸೇರಿಸಿಕೊಂಡು ‘ಎ+’ ಸಿನಿಮಾಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿ ಮುಗಿಸಿದ್ದಾರೆ. ಎಲ್ಲರ ಜೀವನದಲ್ಲಿ ಹೋರಾಟ ಇರಬೇಕು. ಅದು ಇಲ್ಲದೆ ಹೋದಲ್ಲಿ ಬೆಲೆ ಇರುವುದಿಲ್ಲ. ಅದನ್ನು ಸಾಧಿಸುವುದೇ ಗುರಿಯಾಗಿರುತ್ತದೆ. ಅದರಂತೆ ನಾಯಕ ಇದನ್ನೆ ಮಾಡಲು ಹೋದಾಗ ಕಷ್ಟಕಾರ್ಪಣ್ಯಗಳು ಬರುತ್ತದೆ. ಅದೆಲ್ಲಾವನ್ನು ಎದುರಿಸಿದಾಗ ಜನರು ಹೇಗೆ ಸ್ಪಂದಿಸುತ್ತಾರೆ ಎಂಬುದು ಒಂದು ಏಳೆಯ ಕತೆಯಾಗಿದೆ. ಮಾಲೂರು, ಬೆಂಗಳೂರು ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಿಲಿಕಾನ್‍ಸಿಟಿದಲ್ಲಿ ಸಣ್ಣದಾಗಿ ವಿಲನ್ ಪಾತ್ರ ಮಾಡಿದ್ದ ಅನಿಲ್‍ಸಿದ್ದು ಅವರ ಲೇಖನವು ಸಿನಿಜೋಷ್ ಮ್ಯಾಗಜಿನ್‍ದಲ್ಲಿ ಪ್ರಕಟವಾಗಿದೆ. ಇದನ್ನು ನೋಡಿದ ನಿರ್ದೇಶಕರು ಅನ್ನದಾತರನ್ನು ಒಪ್ಪಿಸಿ ನಾಯಕನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಕಿರುತೆರೆ ನಟಿ ಸಂಗೀತ ಒಮ್ಮೆ ಫೇಸ್‍ಬುಕ್‍ನಲ್ಲಿ ತನ್ನ ಭಾವಚಿತ್ರವನ್ನು ಅಪ್‍ಲೋಡ್ ಮಾಡಿದ್ದಾರೆ. ಅದರಿಂದ ಶ್ರೀಮಂತ ಮುಗ್ದ ಹುಡುಗಿ ನಾಯಕಿಯಾಗಿ ಅವಕಾಶ ಸಿಕ್ಕಿದೆಯಂತೆ. ಪ್ರಶಾಂತ್‍ಸಿದ್ದು ಎಂದಿನಂತೆ ಗೆಳೆಯ, ಸೆನ್ಸಾರ್ ಅಧಿಕಾರಿಯಾಗಿ ಕೃಷ್ಣಮೂರ್ತಿನಾಡಿಗ್ ನಟನೆ ಇದೆ. ಕತೆಗೆ ಹಾಡುಗಳು ಅವಶ್ಯಕವಾಗಿಲ್ಲದ ಕಾರಣ ಗಣೇಶ್‍ನಾರಾಯಣ್ ಗಿಟಾರ್, ವೀಣೆ, ಪಿಯಾನೋ ಬಳಸದೆ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಭೂಪಿಂದರ್‍ಸಿಂಗ್ ಛಾಯಗ್ರಹಣ, ರಾಜು ಸಂಕಲನಕಾರನಾಗಿ ಗುರುತಿಸಿಕೊಂಡಿದ್ದಾರೆ. ಹೊಸಬರಿಗೆ ಅವಕಾಶ ಒದಗಿಸಿರುವ ಬಿಲ್ಡರ್ ಪ್ರಭುಕುಮಾರ್ ಅರ್ಧ ಗಂಟೆಯಲ್ಲಿ ಕತೆ ಕೇಳಿ, ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅವರು ಹೇಳುವಂತೆ ತಂಡದವರು ಹೋಂವರ್ಕ್ ಮಾಡಿಕೊಂಡಿದ್ದರಿಂದ ಅಂದುಕೊಂಡಂತಯೇ ನಿಗದಿತ ದಿನಗಳಲ್ಲಿ ಶೂಟಿಂಗ್ ಮುಗಿದಿದೆ. ಪ್ರತಿ ದೃಶ್ಯಗಳು ಕಣ್ಣು ಮುಚ್ಚುವಂತೆ ಮಾಡುವುದಿಲ್ಲ. ಸಿನಿಮಾವು ನೋಡುರಿಗೆ ಆಡಿಸುತ್ತೆ, ಕಾಡಿಸುತ್ತೆ, ಸಿಗುತ್ತೆ ಅಂತ ಖಾತರಿ ಕೊಡುತ್ತಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
27/08/18


For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore