HOME
CINEMA NEWS
GALLERY
TV NEWS
REVIEWS
CONTACT US
ಸಾಲಿಗ್ರಾಮ ಆಡಿಯೋ ಕಲರವ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಸಾಲಿಗ್ರಾಮ’ ಚಿತ್ರದ ಧ್ವನಿಸಾಂದ್ರಿಕೆಯು ಡಾ.ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಅನಾವರಣಗೊಂಡಿತು. ಚಿತ್ರೀಕರಣಕ್ಕೆ ಸಂಬಂದಿಸಿದಂತೆ ಸಾಮಾನುಗಳನ್ನು ಬಾಡಿಗೆಗೆ ನೀಡುವ ಹರ್ಷ ಕತೆ,ನಿರ್ದೇಶನ, ಛಾಯಗ್ರಹಣ ಮತ್ತು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅವರು ಹೇಳುವಂತೆ ಕರ್ಮ ಎನ್ನುವ ಪರಿಕಲ್ಪನೆಯೊಂದಿಗೆ ಕತೆಯನ್ನು ಬರೆಯಲಾಗಿದೆ. ನಾಯಕನಾದವನು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳು, ಪುನರ್‍ಜನ್ಮದಲ್ಲಿ ಆತನ ಸಂಸಾರಕ್ಕೆ ಕಾಡುತ್ತದೆ. ಸಾಲಿಗ್ರಾಮ ಎನ್ನುವ ಶಿಲೆಯನ್ನು ಪೂಜಿಸುವುದರೊಂದಿಗೆ ದುಷ್ಟಶಕ್ತಿಯನ್ನು ಹೋಗಲಾಡಿಸುವುದೇ ಒಂದು ಏಳೆಯ ಸಾರಾಂಶವಾಗಿದೆ ಎಂದು ತಿರುಳನ್ನು ಬಿಚ್ದಿಟ್ಟರು.

ಇಂದಿನ ಯುವ ಪೀಳಿಗೆಯು ಹೊಸ ಹೊಸ ಕಲ್ಪನೆಗಳೊಂದಿಗೆ ಚಿತ್ರಗಳನ್ನು ಜನರಿಗೆ ಉಣಬಡಿಸುತ್ತಿದ್ದಾರೆ. ಈಗಿನ ಜಾಗತೀಕರಣ ಯುಗದಲ್ಲಿ ನವ ನವೀನ ರೀತಿಯಲ್ಲಿ ವಿಕಾಸ ಬರುವಂತೆ ಸಿನಿಮಾಗಳು ಬರುತ್ತಿರುವುದು ಸಂತಸ ತಂದಿದೆ. 65 ವರ್ಷದ ಚಿತ್ರಜೀವನದಲ್ಲಿ ಈಗ ಸುವರ್ಣಯುಗ ಆರಂಭವಾಗಿದೆ. ನಮ್ಮ ಕಾಲದಲ್ಲಿ ವರ್ಷಕ್ಕೆ 6-7 ಸಿನಿಮಾಗಳು ಬರುತ್ತಿದ್ದವು. ಈಗ 250 ಸಂಖ್ಯೆಯಲ್ಲಿ ತೆರೆ ಕಾಣುತ್ತಿರುವುದರಿಂದ ಚಂದನವನವು ಪ್ರವರ್ಧಮಾನಕ್ಕೆ ಬರುತ್ತಿದೆ. ಹಿರಿತನ,ಸಿರಿತನ ಹೀಗೆ ಮುಂದುವರೆಯಲಿ. ಪಾರ್ವತಮ್ಮರಾಜ್‍ಕುಮಾರ್ ಹುಟ್ಟೂರು ಸಾಲಿಗ್ರಾಮ ಆಗಿರುವುದರಿಂದ ವೈಯಕ್ತಿಕವಾಗಿ ಪ್ರಿಯವಾದ ಊರಾಗಿದೆ. ಶುಭವಾಗಲಿ ಅಂತ ಭಗವಾನ್ ಹೇಳಿದರು.

ಸಾಲಿಗ್ರಾಮವನ್ನು ಪವಿತ್ರವಾದ ಕಲ್ಲಿನಲ್ಲಿ ತಿಕ್ಕಿದರೆ ಅದು ಬಂಗಾರವಾಗುತ್ತದೆಂದು ಹಿರಿಯರು ಹೇಳಿದ್ದಾರೆ. ಅದೇ ರೀತಿ ಚಿತ್ರಕ್ಕೆ ಬಂಗಾರ ಬರಲಿ ಎಂಬುದು ಕೆ.ಕಲ್ಯಾಣ್ ಶುಭನುಡಿ.

ಅಮ್ಮನ ಊರು ಇದೇ ಹೆಸರಾಗಿದೆ. ನಿರ್ಮಾಪಕ,ನಿರ್ದೇಶಕ ,ಛಾಯಗ್ರಾಹಕ ಮೂವರು ಒಬ್ಬರೆ ಇರುವುದು ವಿಶೇಷವಾಗಿದೆ. ಸಿದ್ದ್ದಾರ್ಥ ಒಳ್ಳೆಯ ನಟ, ಅವರಿಗೆ ಭವಿಷ್ಯವಿದೆ. ನಿರ್ಮಾಪಕರು ಶಕ್ತಿಧಾಮಕ್ಕೆ ಒಂದು ವರ್ಷಕ್ಕೆ ಆಗುವಷ್ಟು ಅನ್ನದಾನ ಮಾಡಿದ್ದಾರೆ. ಅವರ ಮಗಳು ಪೂರ್ಣಶ್ರೀ ಚೆನ್ನಾಗಿ ಡ್ರಮ್ಸ್ ಬಾರಿಸಿದ್ದಾರೆ. ನಾನೊಬ್ಬನೇ ಕೊಡಬಹುದು. ಎಲ್ಲರ ಶಕ್ತಿಗಳು ಸೇರಿದರೆ ಒಳ್ಳೆಯದಾಗುತ್ತದೆ. ಈ ನಡುವೆ ಒಳ್ಳೆ ಚಿತ್ರಗಳು ಬರುತ್ತಿದೆ. ಹೊಸಬರು ಬರಬೇಕು. ದಿನೇಶ್‍ಗುಂಡುರಾವ್ ಇಷ್ಟದ ಗೆಳಯ. ಅವರ ಯಾವುದೇ ಕಾರ್ಯಕ್ರಮಕ್ಕೂ ಕರೆದರೂ ಹೋಗುತ್ತೇನೆ. ಭವಿಷ್ಯದಲ್ಲಿ ಮುಖ್ಯ ಮಂತ್ರಿ ಆಗುತ್ತಾರೆಂದು ಶಿವರಾಜ್‍ಕುಮಾರ್ ಹೇಳುವಾಗ ದಿನೇಶ್‍ಗುಂಡುರಾವ್ ನಗುವಿನಲ್ಲೆ ಉತ್ತರವಿತ್ತು.

ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ, ದಿನೇಶ್‍ಗುಂಡುರಾವ್ ತಂಡಕ್ಕೆ ಶುಭ ಹಾರೈಸಿದರು. ನಾಯಕ ಸಿದ್ದಾರ್ಥ, ನಾಯಕಿಯರಾದ ಪಲ್ಲವಿರಾಜು, ದಿಶಾಪೂವಯ್ಯ ಚುಟುಕು ಮಾತನಾಡಿದರು. ಸಂಗೀತ ನಿರ್ದೇಶಕ ಸನ್ನಿರಾಜ್ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/10/18
















ಕರ್ಮ ಮಾಡಿದವರು ಬೆಲೆ ತೆರಬೇಕು
ಚಿತ್ರದ ಹೆಸರು ‘ಸಾಲಿಗ್ರಾಮ’. ಹಾಗಂತ ಉಡುಪಿಯ ಬಳಿ ಇರುವ ಸಾಲಿಗ್ರಾಮಕ್ಕೂ ಇದಕ್ಕೂ ಸಂಬಂದವಿಲ್ಲವೆಂದು ಛಾಯಗ್ರಾಹಕ, ನಿರ್ದೇಶಕ ಹರ್ಷನಾರಾಯಣಸ್ವಾಮಿ ಸ್ಪಷ್ಟಪಡಿಸುತ್ತಾರೆ. ಇವರ ಕುರಿತು ಹೇಳುವುದಾದರೆ ಚಿತ್ರರಂಗದಲ್ಲಿ ಏಳೆಂಟು ವರ್ಷಗಳ ಕಾಲ ಸಂಪರ್ಕ ಬೆಳೆಸಿಕೊಂಡು, ಲೇಟೆಸ್ಟ್ ಕ್ಯಾಮಾರಾಗಳನ್ನು ಬಾಡಿಗೆಗೆ ನೀಡುತ್ತಿದ್ದು, ಸದ್ಯದಲ್ಲೆ ತಂತ್ರಜ್ಘಾನಪೂರಿತ ಸ್ಟುಡಿಯೋವನ್ನು ತೆರೆಯುತ್ತಿದ್ದಾರೆ. ಕತೆಯಲ್ಲಿ ಕೆಲಸದ ವರ್ಗಾವಣೆ ಮೇರೆಗೆ ಕಾಲ್ಪನಿಕ ಸಾಲಿಗ್ರಾಮ ಊರಿಗೆ ಕುಟುಂಬವೊಂದು ನೆಲೆಸುತ್ತದೆ. ನಂತರ ಅವರ ಮೇಲೆ ಒಂದರ ನಂತರ ವಿಚಿತ್ರ ಘಟನೆಗಳು ಸಂಭವಿಸಿ ಎಲ್ಲರು ಆತಂಕಕ್ಕೆ ಈಡಾಗುತ್ತಾರೆ. ಅದು ಏನು ಎಂಬುದು ಒಂದು ಏಳೆ ಹಾರರ್ ಮಾದರಿ ಇರುವ ಸಿನಿಮಾ ನೋಡಬೇಕೆಂತೆ. ನಾವು ಮಾಡಿದ ಕರ್ಮಗಳಿಗೆ ಬೆಲೆ ತೆರೆಲೇಬೇಕು. ಒಳ್ಳೆದು ಮಾಡಿದರೆ ಒಳ್ಳೆಯದು ಆಗುತ್ತದೆ, ಕೆಟ್ಟದ್ದನ್ನು ಮಾಡಿದಾಗ ಇಂತಹ ಗಂಡಾಂತರಗಳನ್ನು ಅನುಭವಿಸಬೇಕಾಗುತ್ತದೆ ಎಂದು ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.

ಮಗುವಿನ ತಂದೆಯಾಗಿ ಸಿದ್ದಾರ್ಥ್‍ಮಾದ್ಯಮಿಕ ನಾಯಕನಾಗಿ ಎರಡನೆ ಚಿತ್ರ. ಹೆಂಡತಿಯಾಗಿ ದಿಶಾಪೂವಯ್ಯ ನಾಯಕಿ. ಅನಾಥೆ, ಸ್ವಾರ್ಥೆ, ಧೈರ್ಯದಿಂದ ಭಾವನೆ ತುಂಬಿ ಕೊಂಡಿದ್ದು, ಒಬ್ಬ ಹುಡುಗನ ಪ್ರವೇಶದಿಂದ ಬದುಕು ಬದಲಾವಣೆಗೊಳ್ಳುವ ಪಾತ್ರದಲ್ಲಿ ಪಲ್ಲವಿರಾಜು ನಟನೆ ಇದೆ. ವಯಸ್ಸಿಗೆ ಮೀರಿದ ಗೆಟಪ್‍ದಲ್ಲಿ ಯಶವಂತ್‍ಶೆಟ್ಟಿ, ಇವರೊಂದಿಗೆ ರಂಜಿತ್‍ರಾಜ್‍ಕುಮಾರ್, ಬೇಬಿ ಮನಸ್ವಿ ತಾರಬಳಗದಲ್ಲಿದ್ದಾರೆ. ನಾಲ್ಕು ಹಾಡುಗಳಿಗೆ ಸನ್ನಿರಾಜ್ ಸಂಗೀತವಿದೆ. ರಚನೆ ಸಂದೀಪ್, ಸಂಕಲನ ಸೂರಿ-ಲೋಕಿ, ಸಂಭಾಷಣೆ ಶ್ರೀಹರಿಚೈತನ್ಯ, ನೃತ್ಯ ಹೈಟ್‍ಮಂಜು-ಸೂರಿ ನಿರ್ವಹಿಸಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ, ಮಂಗಳೂರು ಒಂದು ಹಾಡನ್ನು ಮನಾಲಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಿರ್ದೇಶಕರ ಪತ್ನಿ ಪದ್ಮಾವತಿ ನಿರ್ಮಾಪಕರು. ನಾಗರಾಜ್, ರಾಜ್‍ಕುಮಾರ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದು ಸದ್ಯದಲ್ಲೆ ಸೆನ್ಸಾರ್‍ಗೆ ಹೋಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/08/18







For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore